Chief Editor
Manohar. R (Manu)
Photo Journalist
chitrataramanu@gmail.com
+91 9845549026
ನರರಾಕ್ಷಸರ ಅಟ್ಟಹಾಸಕ್ಕೆ ಅಗ್ನಿ ಅಸ್ತ್ರ 3/5 ***
Posted date: 17 Sat, Dec 2022 � 11:11:45 AM

ಸಕಲ ಜೀವರಾಶಿಗಳಿಗೂ ಹೋಲಿಸಿದರೆ  ಮಾನವನಷ್ಟು  ಕ್ರೂರ, ಕೆಟ್ಟ ಪ್ರಾಣಿ ಬೇರೊಂದಿಲ್ಲ ಎನ್ನಬಹುದು.  ಕೆಲ ಮನುಷ್ಯರಲ್ಲಿ  ಕ್ರೌರ್ಯ, ಹಿಂಸಾಪ್ರವೃತ್ತಿ  ಎಷ್ಟು ಭೀಕರವಾಗಿರುತ್ತೆ ಎಂಬುದನ್ನು  ರಾಕ್ಷಸರು‌ ಚಿತ್ರದಲ್ಲಿ ಅರ್ಥಪೂರ್ಣವಾಗಿ ಹೇಳಿದ್ದಾರೆ. ಜಗತ್ತಲ್ಲಿ ಇಂಥವರೂ ಇರ್ತಾರಾ. ನಾವು ಅಂಥ ವರ್ಗಕ್ಕೆ ಸೇರಿದವರಾ ಅಂತ ತಲೆತಗ್ಗಿಸಬೇಕಾದ ವಿಚಾರವನ್ನು ನಿರ್ದೇಶಕರು ಬಹು ಸ್ಪಷ್ಟವಾಗಿ ತೆರೆಮೇಲೆ ಮೂಡಿಸಿದ್ದಾರೆ. ಚಿತ್ರತಂಡ ಈ ಮೊದಲೇ ಹೇಳಿದಂತೆ ಇದೊಂದು ನಾಗರೀಕರನ್ನು ಜಾಗೃತರಾಗಿರಿ ಎಂದು ಎಚ್ಚರಿಸುವ ಪ್ರಯತ್ನ. ಮನುಷ್ಯನೊಳಗೊಬ್ಬ ನರರಾಕ್ಷಸನೂ ಇರಬಹದು ಎಂದು ಈ ಚಿತ್ರ ಹೇಳುತ್ತದೆ, ಜೊತೆಗೆ ನಮ್ಮ ಪೋಲೀಸರ ಶಕ್ತಿ ಸಾಮರ್ಥ್ಯದ  ಬಗ್ಗೆ ಹೆಮ್ಮೆಪಡಬೇಕಿದೆ.  ಕಾರದಪುಡಿ ಶೇಖರ, ಬಿಹಾರಿಲಾಲ್, ಗ್ಯಾಸ್‌ಮುನಿ. ಕಿಲ್ಲರ್ ಜಾಕಿ ಹಾಗೂ  ಕ್ಯಾಬ್ ರಾಜೇಂದ್ರ ಮಾನವಸಂಕುಲವೇ ತಲೆತಗ್ಗಿಸುವಂಥ  ಐವರು ದುರಾತ್ಮರು. ಈ ಐವರು ಕ್ರಿಮಿನಲ್‌ಗಳಿಗೆ ಮನುಷ್ಯನ ಪ್ರಾಣ ಎಂದರೆ   ಇರುವೆಗೆ ಸಮಾನ. ಯಾವುದೇ ಮನುಷ್ಯನ ಮುಖ ಮೂತಿ ನೋಡದೆ ಚಚ್ಚಿ ಸಾಯಿಸುವವರು, ಹೆಣ್ಣು ಎಂಬ ಮರುಕವೂ ಇಲ್ಲದೆ ಹೇಯವಾಗಿ  ಅತ್ಯಾಚಾರಗೈದು, ಅಷ್ಟೇ ಬರ್ಬರವಾಗಿ ಕೊಲೆ ಮಾಡುವುದು, ಅವರಲ್ಲಿರುವ ಹಣ, ಒಡವೆ ದೋಚುವುದು ಇವರ ಕಾಯಕ.  ಇವರಲ್ಲಿ ಜಾಕಿ ಮುಂಬೈ ಮೂಲದವನು, ಪುಕ್ಕಲು ಹೃದಯದ ಸಿರಿವಂತರೇ ಇವನ ಗುರಿ, ಅಮಾಯಕ ಉದ್ಯಮಿಗಳನ್ನು ಹೆದರಿಸಿ ಅವರಿಗೆ ಮೂರು ಸಲ  ಕಾಲ್‌ ಮಾಡಿ ಎಚ್ಚರಿಸುವುದು, ಬಗ್ಗದಿದ್ದರೆ,  ಅವರನ್ನು ಬರ್ಬರವಾಗಿ ಹತ್ಯೆಗೈಯುವುದು. ಇಂಥವನು  ಮುಂಬೈ ಪೋಲೀಸರ ಕಣ್ಣುತಪ್ಪಿಸಿ ಬೆಂಗಳುರಿಗೆ ಬಂದು ನೆಲೆಸಿರುತ್ತಾನೆ, ಮತ್ತೊಬ್ಬ ಬಿಹಾರ್ ಬಿಹಾರಿಲಾಲ್ ಕೂಡ ಹಾಗೇ ಬೆಂಗಳೂರಿಗೆ ಬಂದು ತಲೆತಪ್ಪಿಸಿಕೊಂಡಿರುವವನು ರಜಾದಿನಗಳಲ್ಲಿ, ನಿರ್ಜನ ಪ್ರದೇಶಗಳಲ್ಲಿ ಓಡಾಡುವ ಬೈಕ್‌ ಸವಾರರನ್ನ ಅಡ್ಡಗಟ್ಟಿ ಸುಲಿಗೆ ಮಾಡುವುದು ಈತನ ಕಾಯಕ.   ಇಂಥ ಐವರು  ದುಷ್ಟ ಕ್ರಿಮಿಗಳನ್ನೂ ನಮ್ಮ ಬೆಂಗಳೂರು ಪೋಲೀಸರು  ಹೆಡೆಮುರಿ ಕಟ್ಟಿ ಬಂಧಿಸಿ, ಕಾನೂನಿನ ವಶಕ್ಕೆ  ಒಪ್ಪಿಸುತ್ತಾರೆ, ಆದರೆ ಕಾನೂನು ಅವರಿಗೆ  ಜೈಲುಶಿಕ್ಷೆ ವಿಧಿಸಿ ಸುಮ್ಮನಾಗುತ್ತದೆ. ಇವರು ಜೈಲು ಸಿಬ್ಬಂದಿಯನ್ನು ಕೊಂದು ಅಲ್ಲಿಂದಲೂ  ಪರಾರಿಯಾಗುತ್ತಾರೆ. ಮುಂದೆ ಅವರ ಕೇಸು ಡಿಸಿಪಿ ಅಗ್ನಿ(ಸಾಯಿಕುಮಾರ್) ಕೈಗೆ ಬರುತ್ತದೆ. ಅಗ್ನಿ ಜೊತೆಗೆ  ಐವರು ದಕ್ಷ ಪೋಲೀಸ್ ಆಫೀಸರ್‌ಗಳು ಸೇರಿ ಈ ದುರುಳರನ್ನು  ಪತ್ತೆ ಹಚ್ಚಲು ಪ್ಲಾನ್ ಮಾಡುತ್ತಾರೆ. ಆದರೂ ಪೋಲೀಸರ ಕಣ್ತಪ್ಪಿಸಿ ಈ ಕ್ರೂರಿಗಳು ಒಂದರ ಮೇಲೊಂದರಂತೆ ಕೊಲೆ, ದೌರ್ಜನ್ಯ ಮಾಡುತ್ತಲೇ ಹೋಗುತ್ತಾರೆ. ಪೋಲೀಸರು ಹಾಗೂ ಈ ರಾಕ್ಷಸರ ನಡುವಿನ ಹೋರಾಟದಲ್ಲಿ  ಮೂವರು ಪೋಲೀಸರೂ ಬಲಿಯಾಗಬೇಕಾಗುತ್ತದೆ. ಇವರು ಎಲ್ಲೂ ಕಾಣಿಸದಂತೆ ಎಲ್ಲಾಕಡೆ ಟೈಟ್ ಸೆಕ್ಯೂರಿಟಿ ಹಾಕಿದಾಗ ಹಸಿವನ್ನು ತಡೆಯದೆ ಇವರು ಮಾಡುವ ಕೃತ್ಯ ನೋಡುಗರ ಎದೆ ಝಲ್ಲೆನಿಸುತ್ತದೆ. ಅಲ್ಲದೆ  ಡಿಸಿಪಿ ಅಗ್ನಿಯ ಮುದ್ದಿನ ಮಗಳು ಕಾವ್ಯ ಕೂಡ ಈ ದುರುಳರ ಕೈಗೆ ಸಿಕ್ಕು ಅವರಿಗೆ ಆಹಾರವಾಗುತ್ತಾಳೆ. ಭೂಮಿಯ ಮೇಲೆ ಬದುಕಲು ಯಾವುದೇ ಅರ್ಹತೆಯಿಲ್ಲದ ಈ ಐವರು ದುರುಳರನ್ನು ನಮ್ಮ ಪೋಲೀಸರು ಕೊನೆಗೂ ಕಟ್ಟಿ ಹಾಕುತ್ತಾರಾ  ಇಲ್ವಾ ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್, ರೈಟರ್ ಅಜಯಕುಮಾರ್  ಮೊದಲಬಾರಿಗೆ ಇಂಥ  ಕಥೆಗೆ ಕೈಹಾದ್ದಾರೆ. ನಟ ಸಾಯಿಕುಮಾರ್ ಪೋಲೀಸ್ ಅಧಿಕಾರಿಯಾಗಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.  ಚಿತ್ರದ ಟ್ಯಾಗ್‌ಲೈನ್‌ನಲ್ಲೇ  ಹೇಳಿರುವಂತೆ ಗಟ್ಟಿ ಗುಂಡಿಗೆ ಇರೋರಿಗೆ ಮಾತ್ರವೇ ಈ ಚಿತ್ರ. ಸಿನಿಮಾ ನೋಡಿ ಥೇಟರಿನಿಂದ ಹೊರಬಂದ ಪೇಕ್ಷಕರನ್ನು ಒಂದೆರಡು ದಿನಗಳವರೆಗಾದರೂ ಈ  ಕಥೆ  ಕಾಡುತ್ತದೆ. ಎಮಿಲ್ ಅವರ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಕಥೆಗೆ ಪೂರಕವಾಗಿ ಮೂಡಿಬಂದಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ನರರಾಕ್ಷಸರ ಅಟ್ಟಹಾಸಕ್ಕೆ ಅಗ್ನಿ ಅಸ್ತ್ರ 3/5 *** - Chitratara.com
Copyright 2009 chitratara.com Reproduction is forbidden unless authorized. All rights reserved.